ಮುಚ್ಚಿ

ತಾಲೂಕ ಪಂಚಾಯತ

    ಬಾಗಲಕೋಟ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ 2011 ರ ಜನಗಣತಿಯ೦ತೆ 16,51,892. ಇದರಲ್ಲಿ 83,427, ಪುರುಷರು ಮತ್ತು 81,7645 ಮಹಿಳಿಯರು ಆಗಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 42 ಡಿಗ್ರಿಗಳವರೆಗೆ ಇರಬಲ್ಲದು. ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು. ಇಲ್ಲಿರುವ ಮೂರು ಮುಖ್ಯ ನದಿಗಳೆ೦ದರೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ. ಬಾಗಲಕೋಟ ಬೆಂಗಳೂರಿನಿ೦ದ 520 ಕಿಮೀ ದೂರದಲ್ಲಿದ್ದು ಬಿಜಾಪುರ, ಹುಬ್ಬಳ್ಳಿ, ಬೆಳಗಾವಿ ಮೊದಲಾದವುಗಳಿಗೆ ರಸ್ತೆ ಸ೦ಪರ್ಕ ಹೊ೦ದಿದೆ. ಜಿಲ್ಲೆಯ ಪ್ರವಾಸಿ ತಾಣಗಳು: ಬದಾಮಿ, ಮೇಣಬಸದಿ, ಬನಶಂಕರಿ ದೇವಾಲಯ, ಶಿವಯೋಗ ಮಂದಿರ, ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗು ಕೂಡಲಸಂಗಮ.

ಎಲ್ಲಾ ತಾಲ್ಲೂಕುಗಳ ಮಾಹಿತಿ

  • ಜಮಖಂಡಿ:

    ಇದು ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ತಾಲೂಕ ಪಂಚಾಯತಿಯು 25 ಜನ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿದೆ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಟಿಪು ಸುಲ್ತಾನ್ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು. ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ “ನಿನ್ನ ರಾಜ್ಯದಲ್ಲಿ ಕತ್ತೆಗಳು ಮೇಯಲಿ” ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.

  • ಮೂಧೋಳ:

    ಮುಧೋಳ ಎಂಬುದು ಕರ್ನಾಟಕದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯ ಒಂದು ಪಟ್ಟಣ. ಹಳೆಯ ಹೆಸರು ಮುದೋಳಲು ಆಗಿದೆ. ಇದು ಘಟಫ್ರಭಾ ನದಿಯ ಎಡಬದಿಯ ಬಾಗಲಕೋಟೆ ಪಟ್ಟಣದ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಮುಧೋಳ ಹೌಂಡ್ ಎಂದು ಕರೆಯಲ್ಪಡುವ ಶ್ವಾನ ತಳಿಗೆ ಇದು ಪ್ರಸಿದ್ಧವಾಗಿದೆ. 2007 ರ ಮುಧೋಳ ಜಣಗಣತಿ ಪ್ರಕಾರ, 103,612 ಜನಸಂಖ್ಯೆಯನ್ನು ಹೊಂದಿದೆ. ಪುರುಷರ ಜನಸಂಖ್ಯೆ 51% ರಷ್ಟು ಮತ್ತು 49% ರಷ್ಟು ಮಹಿಳೆಯರು ಇದ್ದಾರೆ. ಮುಧೋಳ ಸರಾಸರಿ 59% ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಪುರುಷ ಸಾಕ್ಷರತೆ 60% ಮತ್ತು ಮಹಿಳಾ ಸಾಕ್ಷರತೆ 40% ಆಗಿದೆ. ಮುಧೋಳನಲ್ಲಿ, ಜನಸಂಖ್ಯೆಯ 15% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದಾರೆ. ಇದು 2001 ರಲ್ಲಿ 42,461 ಜನಸಂಖ್ಯೆಯನ್ನು ಹೋಲಿಸುತ್ತದೆ.

  • ಬಾಗಲಕೋಟೆ:

    ರಾಜ ಮಹಾರಾಜರ ಕಾಲದಲ್ಲಿ ಬಾಗಲಕೋಟ ತಾಲೂಕನ್ನು “ಬಳಗಾರಕೊಟೆ” ಎಂದು ಕರೆಯುತ್ತಿದ್ದರು. ಸ್ವಾತಂತ್ರದ ನಂತರ ಬಾಗಲಕೋಟೆ ಎಂದು ನಾಮಕರವಾಗಿತ್ತು. ಬಾಗಲಕೋಟ ತಾಲೂಕನ್ನು ಬಿಜಾಪೂರ ಜಿಲ್ಲಾ ಪರಿಷತ್ತಿನಲ್ಲಿ ಬ್ಲಾಕ್ ಡೆವಲೆಪಮೆಂಟ ಅಂತಾ ಕಾರ್ಯನಿರ್ವಹಿಸುತ್ತಿತ್ತು. 1993 ರಲ್ಲಿ 3 ಟಾಯರ ಸಿಸ್ಟಮ್ ನಲ್ಲಿ ಬಾಗಲಕೋಟ ತಾಲೂಕ ಪಂಚಾಯತಿಯನ್ನು ಆಗಿ 22 ಗ್ರಾಮ ಪಂಚಾಯತ ಉಳ್ಳುವ ತಾಲೂಕ ಎಂದು ಘೋಷನೆಯಾಯಿತು. ದಿನಾಂಕ:-15-08-1997 ರಲ್ಲಿ ಬಾಗಲಕೋಟ ಜಿಲ್ಲೆಯಾಗಿ ಘೋಷನೆ ಮಾಡಿದರು.

  • ಬೀಳಗಿ:

    ಈ ತಾಲೂಕ ಪಂಚಾಯತ ಸುಂದರ ಹೊರ ನೋಟ ಹೊಂದಿದೆ. ಇದು ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿದ್ದು 20 ಗ್ರಾಮ ಪಂಚಾಯತಗಳನ್ನು ಹೊಂದಿದೆ. ಬೀಳಗಿಯ ಸುಪ್ರಸಿಧ್ದ ಶ್ರೀ ಸಿಧ್ದೇಶ್ವರ ದೇವಾಲಯ ಬಹಳ ಪುರಾತನ ದೇವಾಲಯ ಹಾಗೂ ಆದಿಲ್ ಶಾಹಿ ಕಾಲದ ಏಳೆತ್ತಿನ ಬಾವಿ ಸುಪ್ರಸಿದ್ದ. ಇಲ್ಲಿನ ಗುಹೆಗಳು ತುಂಬಾ ಹಳೆಯ ಕಾಲದ್ದಾಗಿವೆ ಮತ್ತು ಕಲ್ಲಿನ ವಿಗ್ರಹಗಳು, ಸಿಂಧೂರ ಲಕ್ಷ್ಮಣನ ವಾಸಸ್ಥಾನದ ಸ್ಥಳಗಳು ಹಾಗೂ ಕೃಷ್ಣ, ಘಟಪ್ರಾಭಾ ಎಂಬ 2 ನದಿಗಳನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ವ್ಯವಸಾಯ ಕಬ್ಬು. ಬೀಳಗಿ ಸುತ್ತ ಮುತ್ತಲಿನ ಗದ್ದೆಗಳೆಲ್ಲ ಜೇಡಿ ಮಣ್ಣಿನಿಂದ ಕೂಡಿದ್ದು ಹಚ್ಚ ಹಸಿರಾಗಿ ಕಾನುವ ಇವುಗಳ ಮದ್ದೆ ಕೃಷ್ಣ ನದಿಗೆ ಕಟ್ಟಲಾದ 3.5 ಕೀಮಿ ಉದ್ದದ ಸೆತುವೆ ಹೊದಿರುತ್ತದೆ.

  • ಹುನಗುಂದ:

    ಹುನಗುಂದ ತಾಲ್ಲೂಕು ಪಂಚಾಯತಿಯು ಬಾಗಲಕೋಟೆ ಜಿಲ್ಲಾ ಪಂಚಾಯತ್ ಕೇಂದ್ರ ಸ್ಥಾನದಿಂದ 35 ಕಿ.ಮೀ ದೂರದಲ್ಲಿದ್ದು, 30 ಗ್ರಾಮ ಪಂಚಾಯತಿಗಳನ್ನು ಮತ್ತು 163 ಹಳ್ಳಿಗಳನ್ನು ಒಳಗೂಂಡಿದೆ. ಹುನಗುಂದ ತಾಲ್ಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿ ಪ್ರೇಕ್ಷಣಿಯ ಸ್ಥಳವಾದದ ಐಹೊಳೆ ಇದೆ. ಇತಿಹಾಸ ಪ್ರಸಿದ್ದ ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾ ಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ. ಇದು ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದೆ.

  • ಬದಾಮಿ:

    ಬದಾಮಿ ತಾಲ್ಲೂಕು 42 ಗ್ರಾಮ ಪಂಚಾಯತ್ಗಳನ್ನು ಹೊಂದಿದೆ. ಐತಿಹಾಸಿಕ ಸ್ಥಳವೂ ಆಗಿರುವ ಬದಾಮಿ, ಪಟ್ಟದಕಲ್ಲು, ಮಹಾಕೂಟ, ಬನಶಂಕರಿ ಮುಂತಾದ ಧಾರ್ಮಿಕ ಸ್ಥಳಗಳನ್ನು ಹೊಂದಿದೆ.

  • ಇಲಕಲ್ಲ, ರಬಕವಿ-ಬನಹಟ್ಟಿ, ಗುಳೇದಗುಡ್ಡ: ಹೊಸದಾಗಿ ರಚಿಸಲ್ಪಟ್ಟಿರುವ ತಾಲ್ಲೂಕುಗಳು.