ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಲಕಲ್ಲ & ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ. ಮತ್ತಷ್ಟು ಓದಿ
ಇತ್ತೀಚಿನ ಸುದ್ದಿಗಳು
ಜಿಲ್ಲೆಯ ಸಂಕ್ಷಿಪ್ತ ನೋಟ
-
ವಿಸ್ತೀರ್ಣ: 6,593 ಚ.ಕಿಮೀ
-
ತಾಲ್ಲೂಕುಗಳು: 09
-
ಗ್ರಾಮಗಳು: 638
-
ಜನಸಂಖ್ಯೆ: 18,89,752
-
ಭಾಷೆ: ಕನ್ನಡ
-
ಗ್ರಾಮ ಪಂಚಾಯತಿ: 198