ಮುಚ್ಚಿ

ರೈತ ನೋಂದಣಿ

ಮಳೆಯಾಶ್ರಿತ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿ ಹೊಂಡ,ನೀರು ಇಂಗದಂತೆ ತಡೆಯಲು ಪಾಲಿಥೀನ್/ಪರ್ಯಾಯ ಮಾದರಿ ಹೊದಿಕೆ,ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್ಸೆಟ್,ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ(ಹನಿ/ತುಂತುರು ನೀರಾವರಿ) ಹಾಗೂ ಕೃಷಿ ಹೊಂಡದ ನೀರು ಆವಿಯಾಗುವುದನ್ನು ತಡೆಯಲು ಮತ್ತು ಆಕಸ್ಮಿಕ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ.2014-15 ನೇ ಸಾಲಿನಿಂದ ಜುಲೈ 2018ರ ಮಾಹೆಯ ಅಂತ್ಯದವರೆಗೆ 2.22 ಲಕ್ಷ ಕೃಷಿ ಹೊಂಡಗಳು ಹಾಗೂ 2460 ಪಾಲಿಹೌಸ್/ನೆರಳು ಪರದೆ ಮನೆ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು,ಒಟ್ಟಾರೆ 2.25 ಲಕ್ಷ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದಿರುತ್ತಾರೆ.ಈ ಯೋಜನೆ ಪರಿಣಾಮಗಳ ಬಗ್ಗೆ ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳ ಮೌಲ್ಯ ಮಾಪನದ ಪ್ರಕಾರ,ಮಳೆ ಕುಂಠಿತವಾಗಿರುವ ವರ್ಷಗಳಲ್ಲಿ,ಫಲಾನುಭವಿ ರೈತರು ಬೆಳೆಯನ್ನು ಕಾಪಾಡಿಕೊಳ್ಳುವುದಲ್ಲದೇ,ಸರಾಸರಿ ಶೇ.50ರಷ್ಟು ಹೆಚ್ಚುವರಿ ಇಳುವರಿ ಮತ್ತು ಆದಾಯ ಪಡೆಯಲು ಅನುಕೂಲಕರವಾಗಿದೆ.