ಮುಚ್ಚಿ

ಬಾಗಲಕೋಟೆ ಪ್ರವಾಹ

            ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿ ಹರಿವು ದಿನೇ ದಿನೇ ಅಪಾಯದ ಮುನ್ಸೂಚನೆ ನಿಡುತ್ತಿದೆ. ಈಗಾಗಲೆ ಬಾದಾಮಿ ತಾಲೂಕಿನ ಮಲಪ್ರಭಾ ನದಿಯ ದಡದಲ್ಲಿರುವ ಕೆಲವು ಗ್ರಾಮಗಳು & ಹುನಗುಂದ ತಾಲೂಕಿನ ಕೆಲವು ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿದೆ. ಜಮಖಂಡಿ ತಾಲೂಕಿನ ಶಿರಗುಪ್ಪಿ, ಮುತ್ತೂರ, ಕಂಕಣವಾಡಿ, ಕಡಕೋಳ, ಸನಾಳ, ಆಲಗೂರ, ಶೂರಪಾಲಿ, ತುನಚಿ, ಜಂಬಗಿ ಕೆ.ಡಿ, ಜಂಬಗಿ ಬಿ.ಕೆ, ಹೀರೆಪಡಸಲಗಿ, ನಾಗನೂರ, ಕವಟಗಿ ಇನ್ನೂ ಮುಂತಾದ ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿದೆ.